Skip to main content
ಕೇಂಬ್ರಿಡ್ಜ್: ಖ್ಯಾತ ಭೌತಶಾಸ್ತ್ರ ವಿಜ್ಞಾನಿ ಫ್ರೋ.ಸ್ಟೀಫನ್ ಹಾಕಿಂಗ್ (76) ಬುಧವಾರ ಬೆಳಿಗ್ಗೆ ಕೇಂಬ್ರಿಡ್ಜ್ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನಾರಾದರು ಎನ್ನುವ ಮಾಹಿತಿ ಕುಂಟುಬ ಸದ್ಯಸ್ಯರು ಬಹಿರಂಗ ಪಡಿಸಿದ್ದಾರೆ.

ಖ್ಯಾತ ಭೌತಶಾಸ್ತ್ರ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನಿಧನ:

ಇವರ ಕುರಿತು ಅವರ ಮಕ್ಕಳಾದ ಲೂಸಿ,ರಾರ್ಬಟ್ ಮತ್ತು ಟಿಮ್ ಅವರು “ನಮ್ಮ ಪ್ರೀತಿಯ ತಂದೆಯವರ ನಿಧನದಿಂದ ದು:ಖವಾಗಿದೆ” ಎಂದು ಹೇಳುದ್ದಾರೆ.ಹಾಕಿಂಗ್ ಅವರು ಸ್ನಾಯುವಿಗೆ ಸಂಬಂಧಿಸಿದ ಅಪರೂಪದ ತೀವ್ರತರವದ ನರಕೋಶದ ಕಾಯಿಲೆಗೆ ತುತ್ತಾಗಿದ್ದರು.(ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಪಟ್ಟ ಸ್ಥತಿಯಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಗೆ ಸಂಬಂಧಿಸಿದ ನರ-ಸ್ನಾಯು ಕ್ಷಯ ರೋಗ) ಅಲ್ಲದೆ, ಬೆನ್ನು ಹುರಿಯ ಸ್ನಾಯು ಕ್ಷೀಣತೆಯಿಂದಲೂ ಬಳಲುತ್ತಿದ್ದರು.

ಇವರ ಕುರಿತು ಅವರ ಮಕ್ಕಳಾದ ಲೂಸಿ,ರಾರ್ಬಟ್ ಮತ್ತು ಟಿಮ್ ಅವರು  “ನಮ್ಮ  ಪ್ರೀತಿಯ ತಂದೆಯವರ ನಿಧನದಿಂದ ದು:ಖವಾಗಿದೆ” ಎಂದು ಹೇಳುದ್ದಾರೆ
ಇವರ ಕುರಿತು ಅವರ ಮಕ್ಕಳಾದ ಲೂಸಿ,ರಾರ್ಬಟ್ ಮತ್ತು ಟಿಮ್ ಅವರು  “ನಮ್ಮ  ಪ್ರೀತಿಯ ತಂದೆಯವರ ನಿಧನದಿಂದ ದು:ಖವಾಗಿದೆ” ಎಂದು ಹೇಳುದ್ದಾರೆ

1942 ಜನವರಿ 8 ರಂದು ಆಕ್ಸಫರ್ಡ್ ನಲ್ಲಿ ಜನಿಸಿದ ಸ್ಟೀಫನ್ ಹಾಕಿಂಗ್ ಅವರು ಭೌತಶಾಸ್ತ್ರ ವಿಷಯದಲ್ಲಿ ಸಂಶೋಧನೆ ಕೊಡುಗೆಗಳಿಂದ ಪ್ರಸಿದ್ದಿ ಹೊಂದಿದ್ದರು.ವಿಶ್ವವಿಜ್ಞಾನ ಹಾಗೂ ಕ್ವಾಂಟಮ್ ಗುರುತ್ವಾಕರ್ಷಣೆ, ಅದರಲ್ಲಿಯೂ ಮುಖ್ಯವಾಗಿ ಕಪ್ಪು ರಂಧ್ರದ ವಿವರಗಳನ್ನು ಕುರಿತು ಅಧ್ಯಯನ ಮತ್ತು ಸಂಶೋಧನಾ ಕೊಡುಗೆಗಳನ್ನ ನೀಡಿದ್ದಾರೆ. ಸುಮಾರು ನಲವತ್ತು ವರ್ಷಗಳ ಕಾಲ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಹಾಕಿಂಗ್, ಗಾನ್ವಿಲ್ಲೆ ಆಂಡ್ ಕಾಯಸ್ ವಿದ್ಯಾಲಯದಲ್ಲಿ ಫೆಲೋ ಆಗಿ,ಕೇಂಬ್ರಿಡ್ಜ್ ಮತ್ತು ಒಂಟಾರಿಯೊದ ವಾಟರ್ ಲೂನ,ಪೆರಿಮೀಟರ್ ಇನ್ಸ್ ಟಿಟ್ಯೂಟ್ ಫಾರ್ ಥಿಯೊರೆಟಿಕಲ್ ಫಿಸಿಕ್ಸ್ ಸಂಸ್ಥೆಯಲ್ಲಿ ಪ್ರತ್ಯೇಕ ಸಂಶೋಧಕ ಪ್ರಾಧ್ಯಾಪಕ ಸ್ಥಾನವನ್ನು ಅಲಂಕರಿಸಿದ್ದರು.

.(ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಪಟ್ಟ ಸ್ಥತಿಯಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಗೆ ಸಂಬಂಧಿಸಿದ ನರ-ಸ್ನಾಯು ಕ್ಷಯ ರೋಗ) ಅಲ್ಲದೆ, ಬೆನ್ನು ಹುರಿಯ ಸ್ನಾಯು ಕ್ಷೀಣತೆಯಿಂದಲೂ ಬಳಲುತ್ತಿದ್ದರು.

.(ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಪಟ್ಟ ಸ್ಥತಿಯಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಗೆ ಸಂಬಂಧಿಸಿದ ನರ-ಸ್ನಾಯು ಕ್ಷಯ ರೋಗ) ಅಲ್ಲದೆ, ಬೆನ್ನು ಹುರಿಯ ಸ್ನಾಯು ಕ್ಷೀಣತೆಯಿಂದಲೂ ಬಳಲುತ್ತಿದ್ದರು.

ಅಲ್ಲದೆ 2008ನೇ ಇಸವಿಯಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ 50ನೇ ವರ್ಷಾಚರಣೆಯ ಸಂದರ್ಭದಲ್ಲಿ, ಮಾನವ ಜನಾಂಗ ಆಕಾಶದ ಅನ್ವೇಷಣೆಗೆ ಯಾಕೆ ಮುಂದಾಗುತ್ತದೆ ಎಂಬುದರ ಕುರಿತು ಆಸಕ್ತಿದಾಯಕ ಭಾಷಣ ನೀಡಿ ಹಾಕಿಂಗ್ ವಿಶ್ವದ ಗಮನ ಸೆಳೆದರು.ಆಕ್ಸ್ ಫರ್ಡ್ ವಿಶ್ವಾವಿದ್ಯಾಲಯ ಮತ್ತು ಕೇಂಬ್ರಿಡ್ಜ್ ವಿಶ್ವಾವಿದ್ಯಾಯಗಳಲ್ಲಿ ಹಾಕಿಂಗ್ ಉನ್ನತ ಅಧ್ಯಯನ ನಡೆಸಿದ್ದಾರೆ.ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳು ಹಾಕಿಂಗ್ರನ್ನು ಅರಸಿಕೊಂಡು ಬಂದಿವೆ.

ಹಾಕಿಂಗ್ ಕುಟುಂಬ ಮತ್ತು ಹಿನ್ನೆಲೆ:

ಹಾಕಿಂಗ್ ಅವರ ಕುಟುಂಬವೂ ವೈಜ್ಞಾನಿಕ ಕ್ಷೇತ್ರ ಹಿನ್ನೆಲೆಯುಳ್ಳದ್ದೇ ಆಗಿದೆ.ಅವರ ತಂದೆ ಡಾ.ಫ್ರಾಂಕ್ ಹಾಕಿಂಗ್ ಖ್ಯಾತ ಜೀವಶಾಸ್ತ್ರಜ್ಞರಾಗಿದ್ದರು.ಹಾಕಿಂಗ್ ಕೂಡ ಎಳೆಯ ವಯಸ್ಸಿನಲ್ಲೇ ವಿಜ್ಞಾನದ ಬಗ್ಗೆ ಅಪಾರ ಆಸಕ್ತಿ ಇತ್ತು ಎನ್ನಲಾಗಿದೆ ಆದರೆ,ಆರಂಭದಲ್ಲಿ ಗಣಿತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು,ಅದನ್ನೇ ಅಧ್ಯಯನ ಮಾಡಬೇಕು ಎಂದುಕೊಂಡಿದ್ದರಂತೆ.ಅವರು ತಂದೆ ತಾವು ವ್ಯಾಸಂಗ ಮಾಡಿದ ಆಕ್ಸ್ ಫರ್ಡ್ ವಿಶ್ವಾವಿದ್ಯಾಲಯಕ್ಕೆ ಅರ್ಜಿಸಲ್ಲಿಸಲು ಸೂಚಿಸಿದ್ದರು, ಆದರೆ ,ಆ ಸಂಧರ್ಭ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ವಿಷಯಕ್ಕೆ ಪ್ರಾಧ್ಯಾಪಕರೇ ಇಲ್ಲವಾದ್ದರಿಂದ ಹಾಕಿಂಗ್ ರ ಅರ್ಜಿಯನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತ್ತು.ಇದರಿಂದಾಗಿ ಅವರು ಭೌತವಿಜ್ಞಾನ ಅಧ್ಯಯನದಲ್ಲಿ ತೊಡಗಿಸಿಕೊಂಡರು ಎನ್ನಲಾಗಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.