ಬಂಡೀಪುರ ಹುಲಿ ಸಂರಕ್ಷಣಾ ಕೇಂದ್ರ ;
ಬಂಡೀಪುರ ಹುಲಿ ಸಂರಕ್ಷಣಾ ಕೇಂದ್ರ ;
ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ || ಎಲ್. ಹನುಮಂತಯ್ಯ............
ದೆಹಲಿ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಡಾ .ಎಲ್.ಹನುಮಂತಯ್ಯನವರು ಮಾರ್ಚ್ ತಿಂಗಳಲ್ಲಿ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ,ಇಂದು ಏಪ್ರಿಲ್ 4 ರಂದು ನವದೆಹಲಿಯ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ರಾಯಲ್ಸ್ ಚಾಲೆಂಜ್ ರ್ಸ್ ಬೌಲರ್ ಗಳನ್ನ ಬೆಂಡೆತ್ತಿದ ನರೇನ್: ಆರ್ ಸಿ ಬಿ ವಿರುದ್ಧ ಕೋಲ್ಕತ್ತಗೆ 4 ವಿಕೆಟ್ ಜಯ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ರಾಯಲ್ ಚಾಲೆಂಜ್ ರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ವಿರುದ್ಧ ಕೋಲ್ಕತ್ತಾ 4 ವಿಕೆಟ್ ಗಳಿಂದ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತ್ತು. ಬೆಂಗಳೂರಿನ ಪರವಾಗಿ ಬ್ರೆಂಡನ್ ಮೆಕಲಮ್(43), ವಿರಾಟ್ ಕೊಹ್ಲಿ(31), ಎಬಿ ಡಿವಿಲಿಯರ್ಸ್(44) ಹಾಗೂ ಮಂದೀಪ್ ಸಿಂಗ್ (37) ಉತ್ತಮ ರನ್ ತಂದುಕೊಟ್ಟರು.
ರಾಹುಲ್ ಆರ್ಭಟಕ್ಕೆ ಬೆಚ್ಚಿ ಬಿದ್ದ ಡೇವಿಲ್ಸ್ : ಪಂಜಾಬ್ಗೇ ಗೆಲುವು ತಂದು ಕೊಟ್ಟ ಕನ್ನಡಿಗರು...
11 ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಕನ್ನಡಿಗರಿಬ್ಬರ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 6 ವಿಕೆಟ್ ಭರ್ಜರಿ ಜಯ ಗೆಲುವು ದಾಖಲಿಸಿತು.. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ನೀಡಿದ 167 ರನ್ಗಳ ಟಾರ್ಗೆಟ್ ಪಡೆದ ಪಂಜಾಬ್ ತಂಡಕ್ಕೆ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್ಗೆ 58 ರನ್ ಕಲೆ ಹಾಕಿದರು. ಇದರಲ್ಲಿ ಮಯಾಂಕ್ ಕೊಡುಗೆ ಕೇವಲ 7ರನ್. ಉಳಿದ 51 ರನ್ಗಳನ್ನು ಕೆ.ಎಲ್ ರಾಹುಲ್ ಬ್ಯಾಟ್ನಿಂದ ಸಿಡಿದಿದ್ದವು.
ಅಪರಾಧಿ ಯಾರು.?
ಅದೋ…
ಅಲ್ಲಿ ಕಾಣುತ್ತಿರುವುದೇ ಶಂಕರ-ಭವಾನಿ ದೇವಸ್ಥಾನ ನಗರ ವ್ಯಾಪ್ತಿಯಿಂದ ಮೂರು ಮೈಲು ದೂರವಿರುವ ಬೆಳ್ಳನೆಯ ಬಿಳಿ ಗೋಪುರಕ್ಕೆ ಕೆಂಪು ಶಾಂತಿಯ ಧ್ವಜ ಕಾಶದಲ್ಲಿ ಹಾರಾಡುತ್ತದೆ.ಸುತ್ತಲೂ ಭದ್ರವಾದ ರಕ್ಷಣೆ ಗೋಡೆಯನ್ನು ನಿರ್ಮಿಸಿಕೊಂಡು ಪೂಜಾ ಸಮಯವಲ್ಲದ ವೇಳೆಯಲ್ಲಿ ಯಾವ ನೆರಪಿಳ್ಳಿಯನ್ನೂ ಒಳಗೆ ಕರೆದುಕೊಳ್ಳದೆ ಭಕ್ತ ಸಮೂಹವನ್ನು ಹೊರಗಡೆ ನಿಲ್ಲಿಸಿ ಕಾಯಿಸುತ್ತದೆ,ಬೆಳೆಗಿನ ಜಾವ ಐದು ಗಂಟೆಗೆ ದೇವಲಾಯದ ಬಾಗಿಲು ತೆರೆದರೆ ಅದು ಮುಕ್ತಾಯಗೊಳ್ಳುವುದು ಸಂಜೆ ಐದಕ್ಕೆ ,ಸಂಜೆ ಐದರಿಂದ ಮುಂಜಾನೆ ಐದು ಗಂಟೆಯವರೆಗೆ ದೇವಾಲಯದ ಹೊರಗೂ-ಒಳಗೂ ಯಾರೂ ವಾಸ ಮಾಡುವ ಹಾಗೆ ಇಲ್ಲ.
ಬ್ರಾವೋ ಅಬ್ಬರದಿಂದ ಮುಂಬೈಗೆ ಶಾಕ್: ರೋಚಕ ಅಂತ್ಯ ಕಂಡ ಐಪಿಎಲ್ ಆರಂಭಿಕ ಪಂದ್ಯ.
ಆಲ್ಕೋಡ್ ನಡೆ......ಕಾಂಗ್ರೆಸ್ ಕಡೆ.......
ಜೆಡಿಎಸ್ ನ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಆಗಿದ್ದ ಹನುಮಂತಪ್ಪ ಆಲ್ಕೋಡ್ ತೆನೆ ಬಿಟ್ಟು ,ಕೈ ಹಿಡಿದಿದ್ದಾರೆ.ಎರಡು ದಶಕಗಳಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ನಿಂದ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದ ಇವರು ಪಕ್ಷದ ಪ್ರಮುಖ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದರು.ಅಲ್ಲದೆ ಜೆಡಿಎಸ್ ಪಕ್ಷದಿಂದ ಎಂಎಲ್ಸಿಯಾಗಿ ಮತ್ತು ಕುಮಾರ ಸ್ವಾಮಿಯವರ ಸಮ್ಮಿಶ್ರ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡೆ ಸಚಿವರಾಗಿ ಸೇವೆಮಾಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಅಲ್ಲದೇ ಪಕ್ಷದಿಂದ ತಮಗೆ ಟಿಕೇಟ್ ಕೈ ತಪ್ಪಿದ ಕಾರಣಕ್ಕಾಗಿ ಪಕ್ಷ ಬಿಟ್ಟಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಐದು ವರ್ಷ ಜೈಲು ಶಿಕ್ಷೆ ಪ್ರಕಟ.
ಬೆಂಗಳೂರು, ಏಪ್ರಿಲ್ 06: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೋಧಪುರ ನ್ಯಾಯಾಲಯ ನಟ ಸಲ್ಮಾನ್ ಖಾನ್ಗೆ 5 ವರ್ಷ ಜೈಲು ಶಿಕ್ಷೆ ಹಾಗೂ 10000 ರೂಪಾಯಿ ದಂಡ ವಿಧಿಸಲಾಗಿದೆ. ಜೋದ್ಪುರ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಿದ್ದು, ತೀರ್ಪು ಪ್ರಶ್ನಿಸಿ ಸಲ್ಮಾನ್ ಖಾನ್ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಹೆಚ್ಚಿಗಿದೆ.
ಈ ವಾರ ತೆರೆ ಕಾಣುತ್ತಿರುವ ಚಿತ್ರಗಳತ್ತ ಒಂದು ನೋಟ .
ಈ ವಾರ ಕನ್ನಡದಲ್ಲಿ ಒಟ್ಟು 4 ಚಿತ್ರಗಳು ಬಿಡುಗಡೆಯಾಗುತ್ತಿವೆ. ಲವ್ ಸ್ಟೋರಿ, ಹಾರರ್ ಸಿನಿಮಾ, ಆಕ್ಷನ್-ಸಸ್ಪೆನ್ಸ್, ಹಾಗೂ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಹೀಗೆ ವಿಭಿನ್ನ ಬಗೆಯ ಕಥೆ ಹೊಂದಿರುವ ಸಿನಿಮಾಗಳು ಪ್ರೇಕ್ಷಕರೆದುರು ಬರಲು ಸಜ್ಜಾಗಿವೆ. ಶ್ರೀರಾಮಾ ಟಾಕೀಸ್ ಲಾಂಛನದಲ್ಲಿ ರಾಜೇಂದ್ರ ಕಾರಂತ್ ನಿರ್ದೇಶನ ಮಾಡಿರುವ 'ನಂಜುಂಡಿ ಕಲ್ಯಾಣ' ತೆರೆಕಾಣುತ್ತಿದೆ. ತನುಷ್, ಶ್ರಾವ್ಯ, ಕುರಿ ಪ್ರತಾಪ್, ರಾಜೇಂದ್ರ ಕಾರಂತ್, ಪದ್ಮಜಾರಾವ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
'ಗುಳ್ಟು' ನೋಡಿ ಮೆಚ್ಚಿಕೊಂಡ ಸಿಂಪಲ್ ಸುನಿ.!
ಕಳೆದ ವಾರವಷ್ಟೇ ತೆರೆಕಂಡಿದ್ದ 'ಗುಳ್ಟು' ಚಿತ್ರವನ್ನ ನೋಡಿದ ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಿನಿಮಾದ ಬಗ್ಗೆ, ಚಿತ್ರದ ಕಲಾವಿದರ ಬಗ್ಗೆ ಹಾಗೂ ನಿರ್ದೇಶಕರ ಕೆಲಸಕ್ಕೆ ಶಬ್ಬಾಶ್ ಎನ್ನುತ್ತಿದ್ದಾರೆ. ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಗೀತ ಭಟ್ ಸೇರಿದಂತೆ ಹಲವು ನಟ-ನಟಿಯರು ಹಾಗೂ ತಂತ್ರಜ್ಞರು ಗುಳ್ಟು ನೋಡಿ ಇಷ್ಟಪಟ್ಟಿದ್ದಾರೆ.