ಕಂಠೀರವ ಸ್ಟುಡಿಯೋದಲ್ಲಿ ಕೆಜಿಎಫ್ ಚಾಪ್ಟರ್ 2ಗೇ ಮಹೂರ್ತ .
ಕಂಠೀರವ ಸ್ಟುಡಿಯೋದಲ್ಲಿ ಕೆಜಿಎಫ್ ಚಾಪ್ಟರ್ 2ಗೇ ಮಹೂರ್ತ .

ಹೊಂಬಾಳೆ ಫಿಲ್ಮ್ಸ್ ಲಾಂಛನದಲ್ಲಿ ಮೂಡಿಬಂದಿದ್ದ ಕೆಜಿಎಫ್ ಸಿನಿಮಾ ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲ ಜಾಗತಿಕ ಸಿನಿಮಾ ಜಗತ್ತು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ ಚಿತ್ರದ ತಾಂತ್ರಿಕ ಶ್ರೀ ಮಂತಿಕೆ ಕ್ರಿಯಾಶೀಲತೆ,ಕಲಾವಿದರ ನೈಪುಣ್ಯತೆಯನ್ನು ಕಂಡು ಎಲ್ಲರು ಬೆರಗಾಗಿದ್ದರು. ಕೆಜಿಎಫ್ ಚಿತ್ರವನ್ನು ಅಷ್ಟು ದೊಡ್ಡ ಮಟ್ಟಕ್ಕೆ ಕೊಂಡೋಯ್ದಿದ್ದ ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿರ್ಮಾಣದಲ್ಲಿ ಕೆ,ಜಿ.ಎಫ್.ಚಿತ್ರವನ್ನು ಅಷ್ಟು ದೊಡ್ಡ ಮಟ್ಟಕ್ಕೆ ಕೊಂಡೋಯ್ದಿದ್ದ ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿರ್ಮಾಣದ ಕೆ.ಜಿ.ಎಫ್.ಚಾಪ್ಟರ್2 ಇಂದು ಮುಹೂರ್ತ ಆಚರಿಸಿಕೊಂಡಿದೆ.ಕಂಠೀರವ ಸ್ಟುಡಿಯೋದಲ್ಲಿ ಇಂದು ಮುಹೂರ್ತ ಸಮಾರಂಭ ನೆರೆವೆರಿಸಿದೆ .

ನಿರ್ದೇಶಕ ವಿಜಯ ಪ್ರಶಾಂತ್ ರವರ ತಾಯಿ ಶ್ರೀಮತಿ ಭಾರತಿ ಸುಭಾಷ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಸಹೋದರ ಮಂಜಣ್ಣ ಕ್ಲಾಪ್ ಮಾಡಿದರು ಕಿ.ಜಿ.ಎಫ್ ಚಾಪ್ಟರ್2 ಚಿತ್ರ ಏಪ್ರಿಲ್ ತಿಂಗಳಿನಿಂದ ಚಿತ್ರಿಕರಣ ಪ್ರಾರಂಭವಾಗಲಿದೆ ಪ್ರಶಾಂತ್ ನೀಲ್ ಕಥೆ ಚಿತ್ರಕಥೆ, ನಿರ್ದೇಶನ ಸಂಭಾಷಣೆ ಪ್ರಶಾಂತ್ ನೀಲ್, ಚಂದ್ರಮೌಳಿ ಕೆ ಭುವನ್ ಛಾಯಾಗ್ರಹಣ.ರವಿ ಬಸ್ರೂರ್ ಸಂಗೀತ ಶಿವಕುಮಾರ್ ಕಲಾ ನಿರ್ದೇಶನ ಇರುವ ಈ ಚಿತ್ರಕ್ಕೆ ಕಾರ್ತಿಕ್ ಮತ್ತು ರಾಮರಾವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ, ಚಂಪಕಧಾಮ ಬಾಬು,ಕುಮಾರ್,ಗಗನ್ ಮೂರ್ತಿ ನಿರ್ಮಾಣ ಈ ಚಿತ್ರಕ್ಕಿದೆ.ತಾರಾಗಣದಲ್ಲಿ ರಾಕಿಂಗ್ ಸ್ಟಾರ್ ಯಶ್ ,ಅಂನತ್ ನಾಗ್,ಶ್ರೀ ನಿಧಿ ಶೆಟ್ಟಿ,ಮಾಳವಿಕ,ಮಾಸ್ಟರ್ ನಿರ್ಮಾಣ ಅನಮೋಲ್,ನಾಗಭರಣ.ಗೋವಿಂದೇಗೌಡ,ಅವಿನಾಶ್,ರಾಮ್.ಲಕ್ಕಿ ಅಯ್ಯಪ್ಪ ಶರ್ಮ ಮುಂತಾದವರಿದ್ದಾರೆ.
Recent comments