ಬೆಳೆ ಹಾನಿ 20ಸಾವಿರ ಪರಿಹಾರಕ್ಕೆ ಒತ್ತಾಯ ಶ್ರೀ ಎನ್ ಎಸ್ ಬೋಸರಾಜು .
ಬೆಳೆ ಹಾನಿ 20ಸಾವಿರ ಪರಿಹಾರಕ್ಕೆ ಒತ್ತಾಯ ಶ್ರೀ ಎನ್ ಎಸ್ ಬೋಸರಾಜು .

ಸಿರವಾರ : ಸಿರವಾರ ತಾಲ್ಲೂಕಿನಲ್ಲಿ ಬೆಳೆದಂತಹ ಭತ್ತದ ಬೆಳೆ,ಈ ಸಮಯದಲ್ಲಿ ರೈತರ ಕೈ ಹಿಡಿದು ಜೀವನಕ್ಕೆ ಸಹಾಯಕಾರಿ ಯಾಗಬೇಕಿತ್ತು,ಆದರೆ ವಿಧಿ ಈಗಾಗಲೇ ಕೊರೋನಾ ಅನ್ನೋ ಮಹಾ ಮಾರಿಯಿಂದ ಆರ್ಥಿಕವಾಗಿ ಜನರ ಜೀವ ಹಿಂಡುತ್ತಿದೆ,ಈಗಾದರೂ ಆಗೋ ಇಗೋ ಬೆಳೆದಂತಹ ಬೆಳೆಯಿಂದ ಲಾಭ ಪಡೆಯಬೇಕೆಂದರೆ ಈಗ ಪ್ರಕೃತಿ ಹಾಳುಮಾಡಿದೆ.ಇನ್ನೆನ್ನೂ ಕೆಲವೇ ದಿನದಲ್ಲಿ ನಮ್ಮ ಬೆಳೆಯನ್ನ ಕಟಾವು ಮಾಡಿ ಉತ್ತಮ ಬೆಳೆಯಿಂದ ಲಾಭಪಡೆಯಬೇಕು ಎಂದು ಕೊಂಡಿದ್ದ ರೈತನಿಗೆ ಸಿಡಿಲು ಬಡಿದಅಂತೆ ಆಗಿದೆ.

ದಿನಾಂಕ 7,9 ಮತ್ತು 20/04/2020 ರಂದು ಗಾಳಿ ಮತ್ತು ಮಳೆಯ ರಭಸಕ್ಕೆ ಕಟಾವಿಗೆ ಬಂದಿದ್ದ ಬೆಳೆ ಈ ಭತ್ತವು ನೆಲಸಮವಾಗಿ ರೈತರಿಗೆ ಹೊಟ್ಟೆಯ ಮೇಲೆ ಬರೆ ಇಟ್ಟಂತೆ ಆಗಿದೆ. ಸಿರವಾರದ ಸುತ್ತ ಮುತ್ತಲಿನ ಹಳ್ಳಿಗಳಾದ ಸೂರ್ಯ ನಾಯರಣ ಕ್ಯಾಂಪ್,ಬಲ್ಲಟಗಿ ಹಳ್ಳಿಗಳಲ್ಲಿ ಭತ್ತ ನೆಲಸಮವಾಗಿರುವ ಪ್ರದೇಶಗಳಿಗೆ ವಿಧಾನ ಪರಿಷತ್ ಸದಸ್ಯರಾದ ಶ್ರೀ. ಎನ್.ಎಸ್. ಬೋಸ್ ರಾಜು, ಮತ್ತು ಮಾಜಿ ಶಾಸಕರಾದ ಜಿ. ಹಂಪಯ್ಯ ನಾಯಕ, ಅವರು ಭೇಟಿ ಮಾಡಿ ಹಾನಿಯಾಗಿರುವ ಬೆಳೆ ವೀಕ್ಷಣೆ ಮಾಡಿದರು.

ಇನ್ನೂ ಹಾನಿಯಾಗುರುವ ಬೆಳೆಗೆ ಎಕೆರೆಗೆ ಕನಿಷ್ಠ 20ಸಾವಿರ ರೂಗಳ ರೈತರಿಗೆ ಪರಿಹಾರ ನೀಡಬೇಕಾಗಿ ಸರಕಾರಕ್ಕೆ ಒತ್ತಾಯ ಮಾಡಿದರು .ಇದಕ್ಕೆ ಸಂಭದಿಸಿದಂತೆ ಮನವಿಯನ್ನು ಸಲ್ಲಿಸಿದ್ದೇವೆ ಎಂದರು . ಇಂದು ಭೇಟಿ ನೀಡಿ ವೀಕ್ಷಣೆ ಮಾಡಿದ ಈ ಸಂದರ್ಭದಲ್ಲಿ ಚುಕ್ಕಿ ಸೂಗಪ್ಪ ಸಾಹುಕಾರ, ದೇವಣ್ಣ ನವಲಕಲ್, ದಾನನಗೌಡ, ಚುಕ್ಕಿ ಶಿವಕುಮಾರ್, ಶಿವು ಅರಿಕೇರಿ, ನಾಗರಾಜ ಗೌಡ, ಶ್ರೀನಿವಾಸ್ ಜಾಲಾಪುರ ಕ್ಯಾಂಪ್, ಚನ್ನಪ್ಪ ಗೌಡ ಬೆಟ್ಟದೂರು ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು
Recent comments