Skip to main content
ಏಪ್ರಿಲ್ 9 ರಂದು ಎಫ್ ಸಿ ಎಲ್ ಗೆ ಚಾಲನೆ.

ಏಪ್ರಿಲ್ 9 ರಂದು ಎಫ್ ಸಿ ಎಲ್ ಗೆ ಚಾಲನೆ.

ಏಪ್ರಿಲ್ 9 ರಂದು ಎಫ್ ಸಿ ಎಲ್ ಗೆ ಚಾಲನೆ.

ಏಪ್ರಿಲ್ 9 ರಂದು ಎಫ್ ಸಿ ಎಲ್ ಗೆ ಚಾಲನೆ.

ಓನ್ಲಿ ಕನ್ನಡ ಓಟಿಟಿಯಲ್ಲಿ ನೇರ ಪ್ರಸಾರ ಅವರ ಫ್ಯಾನ್ಸ್ ನಮಗಾಗಲ್ಲ, ಇವರ ಫ್ಯಾನ್ಸ್ ನಮಗಾಗಲ್ಲ ಅಂತ ಕೆಲವರು ಮಾತಿನ‌ ಗುದ್ದಾಟ ನಡೆಸುತ್ತಾ ಇರುತ್ತಾರೆ. ಆದರೆ ನಾವೆಲ್ಲ ಒಂದೇ ಎನ್ನುವ ನಿಟ್ಟಿನಲ್ಲಿ ಫ್ಯಾನ್ಸ್ ಕ್ರಿಕೆಟ್ ಲೀಗ್ ಆಯೋಜಿಸಿದ್ದಾರೆ ನಮ್ ಟಾಕೀಸ್ ಭರತ್.

ಇದೇ‌ ಏಪ್ರಿಲ್ 9 , 10 ರಂದು ವಿಜಯನಗರದ ಬಿ.ಜಿ.ಎಸ್ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ. ಸತತ ಏಳು ವರ್ಷಗಳಿಂದ ಈ ಲೀಗ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಕನ್ನಡ ಚಿತ್ರರಂಗದ 12 ಖ್ಯಾತ ನಾಯಕನಟರ ಅಭಿಮಾನಿಗಳ 12 ತಂಡ ಈ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಈ ಪಂದ್ಯಗಳು ನಡೆಯಲಿದೆ. ಶನಿವಾರ ಸಚಿವ ವಿ.ಸೋಮಣ್ಣ ಹಾಗೂ ಡಾ||ವಿ.ನಾಗೇಂದ್ರ ಪ್ರಸಾದ್ ಈ ಲೀಗನ್ನು ಉದ್ಘಾಟಿಸಲಿದ್ದಾರೆ. ಆರು ಓವರ್ ಗಳಂತೆ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಎಂಟು ಓವರ್ ಇರುತ್ತದೆ. ಗೆದ್ದ ತಂಡಕ್ಕೆ ಮೂವತ್ತು ಸಾವಿರ ನಗದು ಸಿಗಲಿದೆ.‌ ಎರಡನೇ ತಂಡಕ್ಕೆ ಇಪ್ಪತ್ತು ಸಾವಿರ ಲಭಿಸಲಿದೆ. ಫೈನಲ್ ಪಂದ್ಯಕ್ಕೆ ಸ್ಯಾಂಡಲ್ ವುಡ್ ನ ಸಾಕಷ್ಟು ಗಣ್ಯರು ಆಗಮಿಸುವ ನಿರೀಕ್ಷೆಯಿದೆ ಎಂದು ನಮ್ ಟಾಕೀಸ್ ಭರತ್ ತಿಳಿಸಿದರು.ಏಪ್ರಿಲ್ 9 ರಂದು ಎಫ್ ಸಿ ಎಲ್ ಗೆ ಚಾಲನೆ.

ಕನ್ನಡಕ್ಕಾಗಿ ಮೀಸಲಿರುವ ಓನ್ಲಿ ಕನ್ನಡ ಓಟಿಟಿಯಲ್ಲಿ ಎಲ್ಲಾ ಪಂದ್ಯಗಳನ್ನು ನೇರಪ್ರಸಾರ ಮಾಡುತ್ತಿದ್ದೇವೆ. ಪ್ಲೇ ಸ್ಟೋರ್ ನಲ್ಲಿ ನಮ್ಮ ಆಪ್ ಡೌನ್‌ಲೋಡ್ ಮಾಡಿಕೊಂಡು ಪಂದ್ಯ ವೀಕ್ಷಿಸಬಹುದು. ಯಾವುದೇ ಶುಲ್ಕ ವಿಲ್ಲದೆ. ಸೋಮವಾರ ಗೋಲ್ಡನ್ ಸ್ಟಾರ್ ಗಣೇಶ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮತ್ತೊಂದು ಕ್ರಿಕೇಟ್ ಲೀಗ್ ಸಹ ನಮ್ಮ ಓಟಿಟಿಯಲ್ಲಿ ನೇರಪ್ರಸಾರವಾಗಲಿದೆ ಎಂದು ತಿಳಿಸಿದ ಓನ್ಲಿ ಕನ್ನಡ ಓಟಿಟಿಯ ಪ್ರದೀಪ್ ಮುಳ್ಳೂರು ತಮ್ಮ ಮುಂದಿನ ಯೋಜನೆ ಬಗ್ಗೆ ಕೂಡ ಹೇಳಿಕೊಂಡರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.