"ದಿ ವೇಕೆಂಟ್ ಹೌಸ್" ಕನ್ನಡ - ಕೊಂಕಣಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ.
"ದಿ ವೇಕೆಂಟ್ ಹೌಸ್" ಕನ್ನಡ - ಕೊಂಕಣಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ.

ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಬರುತ್ತಿದೆ. ಅದರಲ್ಲಿ ತೀರ ವಿಭಿನ್ನ ಎನ್ನಬಹುದಾದ ಕಥೆ ಹೊಂದಿರುವ ಚಿತ್ರ "ದಿ ವೇಕೆಂಟ್ ಹೌಸ್". ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಏಪ್ರಿಲ್ ೪ರಂದು ಈಸ್ಟರ್ ಹಬ್ಬದ ಪ್ರಯುಕ್ತ ಈ ಕನ್ನಡ - ಕೊಂಕಣಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಜಾನೆಟ್ ನರೋನ್ಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಾನೆಟ್ ನರೋನ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ರಾಜ್ಯ ಪ್ರಶಸ್ತಿ ವಿಜೇತ "ಸೋಫಿಯಾ" ಹಾಗೂ ಜಾಕಿಶ್ರಾಫ್ ಅಭಿನಯದ "ಕಾಂತಾರ್" ಚಿತ್ರವನ್ನು ಜಾನೆಟ್ ನರೋನ್ಹ ಅವರೆ ನಿರ್ಮಿಸಿದ್ದರು.

ಕುತೂಹಲಕಾರಿ ಕಥೆಯುಳ್ಳ ಈ ಚಿತ್ರವನ್ನು ಶ್ರೇಯಸ್ಸ್ ಚಿಂಗಾ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಕೆಲವು ಚಿತ್ರಗಳಲ್ಲಿ ನಟಿಸಿರುವ, "ಶಕೀಲ" ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಅವರೊಡನೆ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಶ್ರೇಯಸ್ಸ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಈ ಚಿತ್ರದ ನಾಯಕರಾಗೂ ಶ್ರೇಯಸ್ಸ್ ಚಿಂಗಾ ಅವರೆ ನಟಿಸಿದ್ದು, ಎಸ್ಟರ್ ನರೋನ್ಹ ನಾಯಕಿಯಾಗಿ ಅಭಿನಯಿಸಿದ್ದಾರೆ.

ನಾಯಕಿಯಾಗಿ ಗುರುತಿಸಿಕೊಂಡಿರುವ ಎಸ್ಟರ್ ನರೋನ್ಹ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ.
Recent comments