Skip to main content
​   ​​   ​​   ​ಭಗತ್ ಸಿಂಗರ ಆಶಯಗಳನ್ನು ಈಡೇರಿಸೋಣ - ಶಿವಕುಮಾರ ಮ್ಯಾಗಳಮನಿ.

ಭಗತ್ ಸಿಂಗರ ಆಶಯಗಳನ್ನು ಈಡೇರಿಸೋಣ - ಶಿವಕುಮಾರ ಮ್ಯಾಗಳಮನಿ.

ಭಗತ್ ಸಿಂಗರ ಆಶಯಗಳನ್ನು ಈಡೇರಿಸೋಣ - ಶಿವಕುಮಾರ ಮ್ಯಾಗಳಮನಿ.

Raichur

ಕವಿತಾಳ : ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಐ ) ರಾಯಚೂರು ಜಿಲ್ಲಾ ಸಮಿತಿ ಹಾಗೂ ಕವಿತಾಳ ನಗರ ಘಟಕದ ವತಿಯಿಂದ ಭಗತ್ ಸಿಂಗ್ 114 ನೆಯ ಜನ್ಮ ದಿನಾಚರಣೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು‌. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿದ ಭಗತ್ ಸಿಂಗ್ ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು ಅವರು ಈ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಅವರ ಹೋರಾಟ ಕೇವಲ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಾಗಿರದೆ ಸ್ವಾತಂತ್ರ್ಯ ನಂತರದ ಭಾರತದ ದೂರದೃಷ್ಟಿಯನ್ನು ಹೊಂದಿತ್ತು. ಅವರು ಕೇವಲ ತಮ್ಮ 23 ನೆ ವಯಸ್ಸಿಗೆ ಅಗಾಧವಾದ ಕೆಲಸವನ್ನು ಮಾಡಿದ್ದಾರೆ ಅದು ಇಂದಿನ ವಿದ್ಯಾರ್ಥಿ ಯುವಜನರಿಂದ ಒಂದಷ್ಟು ಮರೆಯಾಗಿರುವುದು ದುರಂತ.

Yadgir

ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು, ಅವರ ಕುರಿತು ಹೆಚ್ಚಿನ ಪಠ್ಯವನ್ನು ಸರ್ಕಾರ ಇಡಬೇಕು ಹಾಗೂ ಅವರ ಹೋರಾಟ ಮತ್ತು ತ್ಯಾಗಮಯಿ ಆದರ್ಶದ ಬದುಕನ್ನು ಪ್ರತಿಯೊಬ್ಬರು ತಿಳಿದುಕೊಂಡು ಅವರ ಕನಸಿನ ಭಾರತದವಾದ ಹಸಿವು ಮುಕ್ತ, ಬಡತನ ಮುಕ್ತ, ಜಾತಿಮುಕ್ತಿ, ಸಮಾನ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ, ಮಾನವನ ಘನತೆಯ ಬದುಕು ಹಾಗೂ ಸಾಮ್ರಾಜ್ಯಶಾಹಿ ವಿರೋಧಿ ಸಮಸಮಾಜದ ಆಶಯಗಳನ್ನು ನಾವು ಈಡೇರಿಸಲು ದುಡಿಯೋಣ ಎಂದರು. ಪ್ರಾಸ್ತಾವಿಕವಾಗಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಮಾತನಾಡಿ ಭಗತ್ ಸಿಂಗ್ ವಿದ್ಯಾರ್ಥಿ ದೆಸೆಯಿಂದಲೆ ಅಭ್ಯಾಸದ ಜೊತೆಗೆ ಹೋರಾಟವನ್ನು ಮೈಗೂಡಿಸಿಕೊಂಡು ಧೀಮಂತ ನಾಯಕ ಅವರನ್ನು ಹೆಚ್ಚು ಓದಬೇಕು ಜೊತೆಗೆ ನಾವು ಏರ್ಪಡಿಸಿದ ಭಗತ್ ಸಿಂಗ್ ರ ಕನಸ್ಸಿನ ಭಾರತದ ವಿಷಯದ ಮೇಲೆ ನೀವು ವಿಶೇಷವಾಗಿ ಪ್ರಬಂಧವನ್ನು ಬರೆದಿರಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಿಳಿದುಕೊಳ್ಳಿ ನಾವುಗಳ ಭಗತ್ ಸಿಂಗ್ ಸೇರಿ ಅನೇಕ ಸಮಾಜ ಸುಧಾರಕರು ಸಾಗಿದ ಹಾದಿಯಲ್ಲಿ ಸಾಗೋಣ ಎಂದರು. ನಂತರ ಸಿಆರ್‌ಪಿ ಹುಸೇನ್ ಭಾಷಾ, ಬಾಲಕಿಯರ ಪ್ರೌಢಶಾಲೆಯ ಕನ್ನಡ ಉಪನ್ಯಾಸಕರಾದ ದೇವೆಂದ್ರಪ್ಪ ಭಗತ್ ಸಿಂಗ್ ರನ್ನು ಕುರಿತು ಮಾತನಾಡಿದರು‌. ಕಾರ್ಯವನ್ನು ಭಗತ್ ಸಿಂಗ್ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಈ ಸಂಧರ್ಭದಲ್ಲಿ ಪದವಿ ಪೂರ್ವ ಕಾಲೇಜಿಜ ಪ್ರಾಚಾರ್ಯರಾದ ಶಕುಂತಲಾ, ಬಾಲಕರ ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶಿವನಗೌಡ, ದೈಹಿಕ ಶಿಕ್ಷಕರಾದ ಗಿರೀಶ್ ಅಂಗಡಿ, ಹನುಮಂತಪ್ಪ, ಎಸ್ಎಫ್ಐ ಮುಖಂಡರಾದ ಬಸವಲಿಂಗ ಹಣಿಗಿ, ನಾಗಮೋಹನ್ ಸಿಂಗ್, ಮೌನೇಶ್, ಶಿವಕುಮಾರ ಸೇರಿ ಇತರರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಘಟಕದ ಅಧ್ಯಕ್ಷರಾದ ಮೌನೇಶ್ ಬುಳ್ಳಾಪುರ ವಹಿಸಿದ್ದು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.