ವಿಶ್ವ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್‌ಗೆ ಸವಾಲು ಹಾಕಲಿರುವ ಭಾರತದ ಯುವ ಚೆಸ್ ಪ್ರತಿಭೆಗಳು
ವಿಶ್ವ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್‌ಗೆ ಸವಾಲು ಹಾಕಲಿರುವ ಭಾರತದ ಯುವ ಚೆಸ್ ಪ್ರತಿಭೆಗಳು
ಯಿಪ್ಪೀ!’ನ ‘ಕುಕ್. ಶೇರ್. ಚೆಕ್‌ಮೇಟ್!’ ಸ್ಪರ್ಧೆಯ ಮೂಲಕ ಬೆಂಗಳೂರು ಮತ್ತು ಚೆನ್ನೈನ 25 ಯುವ ಚೆಸ್ ಆಟಗಾರರಿಗೆ ಗ್ರ್ಯಾಂಡ್‌ಮಾಸ್ಟರ್‌ಗಳ ವಿರುದ್ಧ ಆಡುವ ಅವಕಾಶ
ಬೆಂಗಳೂರು, ಆಗಸ್ಟ್ 29, 2026: ಯಿಪ್ಪೀ! ಬೆಂಗಳೂರು ಮತ್ತು ಚೆನ್ನೈನ 25 ಯುವ ಚೆಸ್ ಆಟಗಾರರಿಗೆ ಜೀವನದಲ್ಲಿ ಒಮ್ಮೆ ಸಿಗುವ ವಿಶಿಷ್ಟ ಅವಕಾಶವನ್ನು ಒದಗಿಸುತ್ತಿದೆ. ಅಲ್ಪೈನ್ ಎಪಿಎಲ್ ಪೈಪರ್ಸ್ ಸಹಯೋಗದಲ್ಲಿ ಆರಂಭಿಸಿರುವ ‘ಕುಕ್. ಶೇರ್. ಚೆಕ್‌ಮೇಟ್!’ ಸ್ಪರ್ಧೆಯ ಮೂಲಕ, ಈ ಯುವ ಆಟಗಾರರು ವಿಶ್ವ ನಂ.1 ಮತ್ತು ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮ್ಯಾಗ್ನಸ್ ಕಾರ್ಲ್ಸನ್, ಭಾರತದ ಚೆಸ್ ದಿಗ್ಗಜೆ ಕೊನೇರು ಹಂಪಿ ಮತ್ತು ಉದಯೋನ್ಮುಖ ತಾರೆ ದಿವ್ಯಾ ದೇಶಮುಖ್ ಸೇರಿದಂತೆ ಗ್ರ್ಯಾಂಡ್‌ಮಾಸ್ಟರ್‌ಗಳೊಂದಿಗೆ ಆಟವಾಡುವ ಅವಕಾಶ ಪಡೆಯಲಿದ್ದಾರೆ.
‘ಕುಕ್. ಶೇರ್. ಚೆಕ್‌ಮೇಟ್!’ ಸ್ಪರ್ಧೆ 13ರಿಂದ 19 ವರ್ಷ ವಯಸ್ಸಿನ ಆಟಗಾರರಿಗೆ ಮುಕ್ತವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಬೆಂಗಳೂರು ಅಥವಾ ಚೆನ್ನೈ ಮೂಲದವರಾಗಿರಬೇಕು ಮತ್ತು ಚೆಸ್ ಡಾಟ್ ಕಾಮ್ ಅಥವಾ ಲಿಚೆಸ್ ಡಾಟ್ ಓಆರ್‌ಜಿ ವೇದಿಕೆಯಲ್ಲಿ ನೋಂದಾಯಿತರಾಗಿರಬೇಕು.
ಈ ಸ್ಪರ್ಧೆಯಲ್ಲಿ ಯುವ ಚೆಸ್ ಆಸಕ್ತರು ತಮ್ಮದೇ ಆದ ಸೃಜನಾತ್ಮಕ ಶೈಲಿಯಲ್ಲಿ ಯಿಪ್ಪೀ! ನೂಡಲ್ಸ್ ಬೌಲ್ ತಯಾರಿಸಿ, ತಮ್ಮ ಜೀವನದ ಅತ್ಯಂತ ನೆನಪಿನ, ರೋಚಕ ಅಥವಾ ನಿರೀಕ್ಷೆಗಿಂತ ವಿಭಿನ್ನವಾದ ಚೆಸ್ ಕ್ಷಣವನ್ನು ಹಂಚಿಕೊಳ್ಳಬೇಕು. ಇವರಲ್ಲಿ ಆಯ್ಕೆಯಾಗುವ 25 ವಿಜೇತರಿಗೆ ವಿಶೇಷ ಚೆಸ್ ಅನುಭವ ಸಿಗಲಿದೆ. ಅವರು ಚೆಸ್ ಚಾಂಪಿಯನ್‌ಗಳನ್ನು ಭೇಟಿಯಾಗಿ, ಅವರೊಂದಿಗೆ ಸಂವಾದ ನಡೆಸಿ, ಅವರಿಗೆ ಸವಾಲು ಹಾಕುವ ಅವಕಾಶ ಪಡೆಯಲಿದ್ದಾರೆ.
ಭಾಗವಹಿಸಲು ಸ್ಪರ್ಧಿಗಳು ಅಧಿಕೃತ ಸ್ಪರ್ಧಾ ಅರ್ಜಿ ಭರ್ತಿ ಮಾಡಬೇಕು. ಅದರಲ್ಲಿ ತಮ್ಮ ಯಿಪ್ಪೀ! ತಯಾರಿಕೆಯ ಫೋಟೋ ಅಥವಾ ವೀಡಿಯೊ, ಚೆಸ್ ಡಾಟ್ ಕಾಮ್ ಅಥವಾ ಲಿಚೆಸ್ ಡಾಟ್ ಓಆರ್‌ಜಿ ಪ್ರೊಫೈಲ್ ವಿವರಗಳು ಮತ್ತು ತಮ್ಮ ಚೆಸ್ ಕಥೆಯನ್ನು ಹಂಚಿಕೊಳ್ಳಬೇಕು. ಸ್ಪರ್ಧೆ ಆಗಸ್ಟ್ 26ರಿಂದ ಸೆಪ್ಟೆಂಬರ್ 2, 2026ರವರೆಗೆ ನಡೆಯಲಿದೆ. ಸೆಪ್ಟೆಂಬರ್ 2, 2026 ಮಧ್ಯಾಹ್ನ 12 ಗಂಟೆಗೆ ಪ್ರವೇಶಿಕೆಗಳು ಮುಕ್ತಾಯಗೊಳ್ಳಲಿದ್ದು, ವಿಶೇಷ ಚೆಸ್ ಅನುಭವಕ್ಕೂ ಮುನ್ನ ವಿಜೇತರನ್ನು ಘೋಷಿಸಲಾಗುತ್ತದೆ.
ಚೆಸ್ ಆಟದಾಚೆಗೂ, ವಿಜೇತರಿಗೆ ತಮ್ಮದೇ ಆದ ಯಿಪ್ಪೀ! ತಯಾರಿಕೆಗಳನ್ನು ಸಿದ್ಧಪಡಿಸುವ, ಚಾಂಪಿಯನ್‌ಗಳೊಂದಿಗೆ ಬಿಸಿ ನೂಡಲ್ಸ್ ಬೌಲ್ ಹಂಚಿಕೊಳ್ಳುವ ಮತ್ತು ಚೆಸ್ ಮೇಲಿನ ಸಾಮಾನ್ಯ ಪ್ರೀತಿಯ ಮೂಲಕ ತಮ್ಮ ಕಥೆಗಳನ್ನು ಹಂಚಿಕೊಳ್ಳುವ ಅವಕಾಶ ದೊರೆಯಲಿದೆ.
ಈ ಉಪಕ್ರಮದ ಕುರಿತು ಅತುಲ್ ಪೂಜಾರ್, ITC ಲಿಮಿಟೆಡ್‌ನ ಆಹಾರ ವಿಭಾಗದ ತಿಂಡಿಗಳು ಮತ್ತು ನೂಡಲ್ಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ̧ರು, ಅವರು ಮಾತನಾಡಿ, “ಯುವಜನತೆಗೆ ಕೇಂದ್ರೀಕೃತ ಬ್ರ್ಯಾಂಡ್ ಆಗಿರುವ ಯಿಪ್ಪೀ!, ಭಾರತದಲ್ಲಿ ಕ್ರೀಡೆಗಳಿಗೆ ಬೆಂಬಲ ನೀಡುವುದರ ಜೊತೆಗೆ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ. ಅಲ್ಪೈನ್ ಎಪಿಎಲ್ ಪೈಪರ್ಸ್ ಜೊತೆಗಿನ ನಮ್ಮ ಸಹಯೋಗದ ಮೂಲಕ, ಜಾಗತಿಕ ಚಾಂಪಿಯನ್‌ಗಳೊಂದಿಗೆ ಚೆಸ್ ಆಟವನ್ನು ಹತ್ತಿರದಿಂದ ಅನುಭವಿಸಲು ಬಯಸುವ ಯುವ ಚೆಸ್ ಆಟಗಾರರಿಗೆ ವಿಶಿಷ್ಟ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ,” ಎಂದು ಹೇಳಿದರು.
ಈ ಉಪಕ್ರಮವು ‘ಬಿಯಾಂಡ್ ದ ಮೂವ್’ ಅಭಿಯಾನದ ಭಾಗವಾಗಿದೆ. ಈ ಅಭಿಯಾನವು ಚೆಸ್ ಬೋರ್ಡಿನ ಪ್ರತಿಯೊಂದು ಚಲನೆಯಾಚೆಯಿರುವ ಉತ್ಸಾಹ, ಕಥೆಗಳು ಮತ್ತು ಅನುಭವಗಳನ್ನು ಸಂಭ್ರಮಿಸುತ್ತದೆ.
ಯಿಪ್ಪೀ! ಕುರಿತು
ಯಿಪ್ಪೀ! ಐಟಿಸಿ ಫುಡ್ಸ್‌ನ ಇನ್‌ಸ್ಟಂಟ್ ನೂಡಲ್ಸ್ ಬ್ರ್ಯಾಂಡ್ ಆಗಿದೆ. ಮುಂಬರುವ ಟೆಕ್ ಮಹೀಂದ್ರಾ ಗ್ಲೋಬಲ್ ಚೆಸ್ ಲೀಗ್‌ಗಾಗಿ ಅಲ್ಪೈನ್ ಎಪಿಎಲ್ ಪೈಪರ್ಸ್‌ನ ಪ್ರಮುಖ ಪಾಲುದಾರನಾಗಿದೆ.
Recent comments