ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ.
ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ.
ಖ್ಯಾತ ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಇದೇ ಡಿಸೆಂಬರ್ 28 ರಂದು ನಡೆಯಲಿದೆ.
ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ.
ಖ್ಯಾತ ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಇದೇ ಡಿಸೆಂಬರ್ 28 ರಂದು ನಡೆಯಲಿದೆ.
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು 2021ರ ವರ್ಷದ ಸಿನಿಮಾ ನಟನೆಯಲ್ಲಿ ಫುಲ್ ಬ್ಯುಸಿ.
2021ರಲ್ಲಿ ವರ್ಷಪೂರ್ತಿ ಶ್ರೇಯಸ್ ಮಂಜು ಬ್ಯುಸಿಯೋ ಬ್ಯುಸಿ ಸಿನಿಮಾ ಬತ್ತಳಿಕೆಯಲ್ಲಿ ಎರಡು ಬಹುಭಾಷಾ ಸಿನಿಮಾ, ಒಂದು ಕನ್ನಡ ಚಿತ್ರ, ಮತ್ತೊಂದು ತೆರೆಗೆ ಸಿದ್ಧ. ಪಡ್ಡೆಹುಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟದ್ದ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಸಂಪೂರ್ಣ ಸಿನಿಮಾದಲ್ಲಿಯೇ ಮುಳುಗಿದ್ದಾರೆ.
ಐರಾವನ್ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್.
ಎಂಜಿಪಿ ಕ್ರಿಯೇಷನ್ಸ್ ಅರ್ಪಿಸುವ ನಿರಂತರ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾದ ಐರಾವನ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಜೆಕೆ,ವಿವೇಕ್& ಆದ್ವಿತಿ ಅಭಿನಯದ ಚಿತ್ರದ ಟೀಸರ್ ನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಹಾರೈಸಿದರು.
ಇದೇ 25 ರಂದು " ಯುವರತ್ನ " ಚಿತ್ರದ 2ನೇ ಸಾಂಗ್ ರಿಲೀಸ್.
ಹೊಂಬಾಳೆ ಫಿಲಂಸ್ ರವರ ಬಹುನಿರೀಕ್ಷಿತ ಚಿತ್ರ ಯುವರತ್ನ. ಈ ಚಿತ್ರದ ಎರಡನೇ ಹಾಡು ' ನೀನಾದೆ ನಾ ' ಇದೇ ಡಿಸೆಂಬರ್ 25ರಂದು ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ನಲ್ಲಿ 12: ೦5ಕ್ಕೆ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಹಿತ್ಯ ತ ಕನ್ನಡದಲ್ಲಿ ಗೌಸ್ ಪೀರ್ ಅವರು ಬರೆದಿದ್ದು, ರಮಜೋಗಯ್ಯ ಶಾಸ್ತ್ರಿಯವರು ತೆಲುಗಿನಲ್ಲಿ ಬರೆದಿದ್ದಾರೆ.
ನಮ್ಮ ಫ್ಲೀಕ್ಸ್ ಓಟಿಟಿ ವೇದಿಕೆಯಲ್ಲಿ ಭೂಮಿಕಾ ಸಿನಿಮಾ ರಿಲೀಸ್.
ಬೆಸ್ತರ ಹುಡುಗಿಯ ಕಥೆಯೇ ಚಿತ್ರದ ಜೀವಾಳ ಇದೇ 25ಕ್ಕೆ ಸಿನಿಮಾ ಬಿಡುಗಡೆ ಹೀರಾ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ತಯಾರಾದ ಭೂಮಿಕಾ ಸಿನಿಮಾ ಕನ್ನಡದ ಜತೆಗೆ ತುಳುವಿನಲ್ಲಿಯೂ ಸಿದ್ಧವಾಗಿ ಬಿಡುಗಡೆಗೆ ಬಂದಿದೆ. ಡಿ.25ರ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಮ್ಮ ಫ್ಲೀಕ್ಸ್ ಓಟಿಟಿ ಫ್ಲಾಟ್ಫಾರ್ಮ್ ನಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಳ್ಳಲು ತಂಡ ಮಾಧ್ಯಮದ ಮುಂದೆ ಬಂದಿತ್ತು.
'ವೈಕುಂಠಕೆ' ದಾರಿ ಸಲೀಸು.
ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ 'ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರ ವೀಕ್ಷಿಸಿದ ನಂತರ ಸೆನ್ಸಾರ್ ಮಂಡಳಿ ಸದಸ್ಯರು, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ನಿರ್ದೇಶಕರನ್ನು ಪ್ರಶಂಸಿಸಿದ್ದಾರೆ.
'ಶಂಭೋ ಶಿವ ಶಂಕರ' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ.
ಅದ್ದೂರಿಯಾಗಿ ಚಿತ್ರೀಕರಣಗೊಂಡ ನಾಯಕಿ ಸೋನಾಲ್ ಮಾಂಟೆರೊ ಪ್ರವೇಶ ದೃಶ್ಯ. ಅಘನ್ಯ ಪಿಕ್ಚರ್ಸ್ ಲಾಂಛನದಲ್ಲಿ ವರ್ತೂರ್ ಮಂಜು ಅವರು ನಿರ್ಮಿಸುತ್ತಿರುವ 'ಶಂಭೋ ಶಿವ ಶಂಕರ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ನಾಯಕಿ ಸೋನಾಲ್ ಮಾಂಟೆರೊ ಅವರ ಪ್ರವೇಶ ದೃಶ್ಯವನ್ನು(ಇಂಟ್ರಡಕ್ಷನ್ ಸೀನ್) ಇತ್ತೀಚೆಗೆ ಉತ್ತರಹಳ್ಳಿಯ ಸುಬ್ರಮಣ್ಯ ಪುರ ಪೊಲೀಸ್ ಠಾಣೆ ಬಳಿ ಅದ್ದೂರಿಯಾಗಿ ಚಿತ್ರೀಕರಿಸಿಕೊಳ್ಳಲಾಯಿತು.
ರಾಜತಂತ್ರ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಪುನೀತ್.
ಜನವರಿ 1ಕ್ಕೆ ಚಿತ್ರಮಂದಿರಗಳಲ್ಲಿ ರಿಲೀಸ್ ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ಮುಹೂರ್ತ ಮುಗಿಸಿಕೊಂಡಿದ್ದ ರಾಜ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ರಾಜಕುಮಾರ್ ನಟಿಸಿರುವ ರಾಜತಂತ್ರ ಸಿನಿಮಾ ಇದೀಗ ಬಿಡುಗಡೆಗೆ ದಿನಾಂಕ ಘೋಷಣೆ ಮಾಡಿಕೊಂಡಿದೆ.