ನಿರಂಜನ್ ಈಗ ಸೂಪರ್ ಸ್ಟಾರ್
ನಿರಂಜನ್ ಈಗ ಸೂಪರ್ ಸ್ಟಾರ್

ಉಪೇಂದ್ರ ನಿರ್ದೇಶಕರಾಗಿ, ನಟರಾಗಿ ಹೆಸರಾದವರು. ತಮ್ಮ ಅದ್ಭುತ ಪ್ರತಿಭೆ ಮೂಲಕ ಕನ್ನಡದಲ್ಲಷ್ಟೇ ಅಲ್ಲದೇ ಇತರ ಭಾಷೆಗಳಲ್ಲಿಯೂ ಹೆಸರು ಮಾಡಿ ಸೂಪರ್ ಸ್ಟಾರ್ ಆದವರು ಉಪೇಂದ್ರ. ಈಗ ಅವರ ಕುಟುಂಬದಿಂದ ಚಂದನವನಕ್ಕೆ ಮತ್ತೊಬ್ಬ ನಾಯಕ ನಟನ ಆಗಮನವಾಗುತ್ತಿದೆ. ಹೌದು. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪೂರ್ಣಪ್ರಮಾಣದ ನಾಯಕನಾಗಿ ಬರುತ್ತಿದ್ದಾರೆ 'ಸೂಪರ್ ಸ್ಟಾರ್' ಚಿತ್ರದ ಮೂಲಕ.