Skip to main content
ಸದ್ದು ಮಾಡುತ್ತಿದೆ "ಗಿಲ್ಕಿ" ಚಿತ್ರದ ಟ್ರೇಲರ್.*

ಸದ್ದು ಮಾಡುತ್ತಿದೆ "ಗಿಲ್ಕಿ" ಚಿತ್ರದ ಟ್ರೇಲರ್.*

*ಸದ್ದು ಮಾಡುತ್ತಿದೆ "ಗಿಲ್ಕಿ" ಚಿತ್ರದ ಟ್ರೇಲರ್.

Kannada

ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳಿಗೆ ಪ್ರೇಕ್ಷಕರು ಸೈ ಅಂದಿದ್ದು ಹೆಚ್ಚು. "ಗಿಲ್ಕಿ" ಚಿತ್ರ ಕೂಡ ವಿಭಿನ್ನ ಕಥಾವಸ್ತು ಹೊಂದಿರುವ ಚಿತ್ರ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ನಿರ್ದೇಶಕ ಜಯತೀರ್ಥ, ಸತ್ಯಪ್ರಕಾಶ್ ಹಾಗೂ ನಿರ್ಮಾಪಕ ಮಂಜುನಾಥ್ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಮ್ಮ ಚಿತ್ರ ಮಾಮೂಲಿ ತರಹ ಇರುವುದಿಲ್ಲ. ಹೆಚ್ಚು ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡಿದವರೂ ಕೂಡ ಪ್ರೇಕ್ಷಕನಿಗೆ ಹೊಸ ಪ್ರಪಂಚ ಕಟ್ಟಿಕೊಡುವ ಕೆಲಸ ಮಾಡುತ್ತಾರೆ. ಆದರೆ ನಾವು ಸೀಮಿತ ಬಜೆಟ್ ನಲ್ಲೇ ಅಂತಹ ಪ್ರಯೋಗಕ್ಕೆ ಮುಂದಾಗಿದ್ದೇವೆ.

ಸಮಾಜದಿಂದ ವಿಮುಖರಾದ ಮೂರು ಪಾತ್ರಗಳ ಮೂಲಕ ನಮ್ಮ ಚಿತ್ರಕಥೆ ಸಾಗುತ್ತದೆ. ಅದು ಗಿಲ್ಕಿ , ನ್ಯಾನ್ಸಿ ಹಾಗೂ ಶೇಕ್ಸ್ ಪಿಯರ್ ಪಾತ್ರಗಳು. ಗಿಲ್ಕಿ ನಾಯಕನ ಪಾತ್ರದ ಹೆಸರು. ಈತ ನೋಡಲು ಮಾಮೂಲಿ ತರಹ ಕಾಣುತ್ತಾನೆ. ಆದರೆ ಮಾತನಾಡಲು ಶುರು ಮಾಡಿದರೆ ಆತನ ಸ್ವಭಾವ ತಿಳಿಯುತ್ತದೆ. ನಾನ್ಸಿ ನಾಯಕಿಯ ಪಾತ್ರ. ಈಕೆ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಖಾಯಿಲೆಗೆ ತುತ್ತಾಗಿ ತನ್ನ ಕೈ - ಕಾಲುಗಳ ಸ್ವಾಧೀನ ಕಳೆದುಕೊಂಡಿರುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ‌. ನಂತರ ಏನಾಗುತ್ತದೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಇದೇ ಹದಿನೆಂಟರಂದು ನಮ್ಮ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿತ್ತಿದೆ. ಸತ್ಯಪ್ರಕಾಶ್ ಅವರೆ ತಮ್ಮ ವಿತರಣಾ ಸಂಸ್ಥೆ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ . ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ವೈ.ಕೆ. ನಾನು ಹಾಗೂ ನಿರ್ದೇಶಕರು "ಅಮೃತ ಅಪಾರ್ಟ್ಮೆಂಟ್" ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ನಾನು ಆಗಲೇ ವೈ ಕೆ ಅವರಿಗೆ ಹೇಳಿದ್ದೆ. ನೀವು ಒಳ್ಳೆಯ ಕಥೆ ಸಿದ್ದಮಾಡಿ ಸಿನಿಮಾ ಮಾಡೋಣ ಎಂದು. ಅವರು ಹೇಳಿದ ಕಥೆ ಚೆನ್ನಾಗಿತ್ತು.

ಸಿನಿಮಾ ಆರಂಭ ಮಾಡಿದ್ದೆವು. ಸಾಕಷ್ಟು ಜನರ ಸಹಕಾರದಿಂದ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಇದೇ ಹದಿನೆಂಟನೆಯ ತಾರೀಖು ತೆರೆಗೆ ಬರುತ್ತಿದೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ನರಸಿಂಹ ಕುಲಕರ್ಣಿ. ನನಗೆ ನಿರ್ದೇಶಕರು ಕಥೆ ಹೇಳಲು ಆಹ್ವಾನಿಸಿದಾಗ ನಾನು ಹೋಗಲು ಹಿಂದೆ ಸರಿದಿದೆ. ನಂತರ ಕಥೆ ಕೇಳಿದೆ. ಅವರು ಕಥೆ ಹೇಳುತ್ತಿದಾಗಲೇ ನಾನು ಪಾತ್ರದಲ್ಲಿ ಮುಳಗಿ ಹೋದೆ . ಈ ಪಾತ್ರ ನಾನೇ ಮಾಡಬೇಕೆಂದು ನಿರ್ಧಾರ ಮಾಡಿದೆ. ಚಿತ್ರ ತೆರೆಗೆ ಬರುತ್ತಿದೆ. ಟ್ರೇಲರ್ ಹಾಗೂ ಹಾಡುಗಳನ್ನು ನೋಡಿದವರು ಮೆಚ್ಚುಗೆ ಮಾತುಗಳಾಡುತ್ತಿದ್ದಾರೆ. ನನಗೂ ಕೂಡ ಈಗಾಗಲೇ ಬೇರೆ ಚಿತ್ರಗಳಲ್ಲಿ ನಟಿಸಲು ಅವಕಾಶ ಬರುತ್ತಿದೆ ಎಂದು ನಾಯಕಿ ಚೈತ್ರ ತಿಳಿಸಿದರು. ನಾನು ಈ ಹಿಂದೆ ಚಿತ್ರದ ಹಾಡುಗಳನ್ನು ನೋಡಿ ಖುಷಿ ಪಟ್ಟಿದೆ. ಟ್ರೇಲರ್ ಕೂಡ ಚೆನ್ನಾಗಿದೆ. ಹೊಸ ಪ್ರಯೋಗಕ್ಕೆ ಒಳಿತಾಗಲಿ ಎಂದು ಜಯತೀರ್ಥ ಹಾರೈಸಿದರು. ಎಲ್ಲಾ ಪ್ರೇಮಕಥೆ ಆಧಾರಿತ ಸಿನಿಮಾಗಳಲ್ಲಿ ನಾಯಕ ಕಟ್ಟುಮಸ್ತಾಗಿರುತ್ತಾನೆ. ನಾಯಕಿ ಸುಂದರವಾಗಿರುತ್ತಾಳೆ.

ಆದರೆ ಅಂಗವಿಕಲೆ ಮತ್ತು ಬುದ್ದಿಮಾಂದ್ಯನ ನಡುವೆ ಪ್ರೀತಿ ಹುಟ್ಟುತ್ತದೆ ಎಂಬ ವಿಷಯ ತೆಗೆದುಕೊಂಡಿರುವ ನಿರ್ದೇಶಕರಿಗೆ ಅಭಿನಂದನೆ ಎಂದರು ಸತ್ಯಪ್ರಕಾಶ್. ಚಿತ್ರದಲ್ಲಿ ನಟಿಸಿರುವ ಗೌತಮ್ ರಾಜ್, ಸಂಗೀತ ನೀಡಿರುವ ಆದಿಲ್ ನಡಾಫ್ ಹಾಗೂ ಸಂಕಲನಕಾರ ಕೆಂಪರಾಜ್ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.