ಸರ್ಕಾರಿ ಆದೇಶ ಪಾಲಿಸಿ ಚಿತ್ರೀಕರಣ ಬಿಟ್ಟು ಉಳಿದ ಚಟುವಟಿಕೆ ಮಾಡಿಕೊಳ್ಳುವಂತೆ ರಾಜ್ಯಸರ್ಕಾರದ ಸೂಚನೆ..
ಸರ್ಕಾರಿ ಆದೇಶ ಪಾಲಿಸಿ ಚಿತ್ರೀಕರಣ ಬಿಟ್ಟು ಉಳಿದ ಚಟುವಟಿಕೆ ಮಾಡಿಕೊಳ್ಳುವಂತೆ ರಾಜ್ಯಸರ್ಕಾರದ ಸೂಚನೆ.

ಬೆಂಗಳೂರು :ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಇಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ , ಉಪಾಧ್ಯಕ್ಷ ಎಂ.ಜಿ.ರಾಮಮೂರ್ತಿ, ಕಾರ್ಯದರ್ಶಿ ಕೆ.ಮಂಜು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎ.ಗಣೇಶ್ , ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ರವಿಶಂಕರ್ ಅವರ ತಂಡ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ಅಶೋಕ್ ಅವರು ಚಿತ್ರೀಕರಣಕ್ಕೆ ಈ ಸದ್ಯ ಅನುಮತಿ ನೀಡಲು ಸಾಧ್ಯವಿಲ್ಲ.

ಆದರೆ ಡಬ್ಬಿಂಗ್, ಎಡಿಟಿಂಗ್, ಗ್ರಾಫಿಕ್ಸ್, ರೀರೆಕಾರ್ಡಿಂಗ್ ಮುಂತಾದ ಚಟುವಟಿಕೆಗಳನ್ನು ಸರ್ಕಾರದ ಆದೇಶ ಹಾಗೂ ಕೊರೋನ ನಿವಾರಣೆಗೆ ಇರುವ ನಿಯಮಗಳನ್ನು ಪಾಲಿಸಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.. ಚಿತ್ರೀಕರಣ ಬಿಟ್ಟು ಬೇರೆ ಚಟುವಟಿಕೆಗಳನ್ನು ಮಾಡಿಕೊಳ್ಳಲು ಅನವು ಮಾಡಿಕೊಟ್ಟಿರುವ ರಾಜ್ಯಸರ್ಕಾರಕ್ಕೆ ವಿಶೇಷವಾಗಿ ಸಚಿವ ಆರ್ ಅಶೋಕ್ ಅವರಿಗೆ ಮತ್ತು ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಪ್ರವೀಣ್ ಕುಮಾರ್ ಅವರು ಧನ್ಯವಾದ ತಿಳಿಸಿದ್ದಾರೆ.. ಸರ್ಕಾರದ ನಿಯಮಗಳನ್ನು ಪಾಲಿಸಿ ಚಿತ್ರೀಕರಣ ಬಿಟ್ಟು ಉಳಿದ ಚಟುವಟಿಕೆಗಳನ್ನು ಮಾಡಿಕೊಳುವಂತೆ ಕನ್ನಡ ಚಿತ್ರ ನಿರ್ಮಾಪಕರಿಗೆ ಹಾಗು ತಂತ್ರಜ್ಞರಿಗೆ ಅಧ್ಯಕ್ಷ ಪ್ರವೀಣ್ ಕುಮಾರ್ ಮನವಿ ಮಾಡಿದ್ದಾರೆ...
Recent comments