Skip to main content
ಮಣ್ಣಲ್ಲಿ ಮಣ್ಣಾಗುವವರೆಗು ಗ್ರಾಮೀಣ ಕ್ಷೇತ್ರದ ಜನತೆಗಾಗಿ ದುಡಿಯುವೆ ಬಿ ಶ್ರೀ ರಾಮುಲು.

ಮಣ್ಣಲ್ಲಿ ಮಣ್ಣಾಗುವವರೆಗು ಗ್ರಾಮೀಣ ಕ್ಷೇತ್ರದ ಜನತೆಗಾಗಿ ದುಡಿಯುವೆ ಬಿ ಶ್ರೀ ರಾಮುಲು.

ಮಣ್ಣಲ್ಲಿ ಮಣ್ಣಾಗುವವರೆಗು ಗ್ರಾಮೀಣ ಕ್ಷೇತ್ರದ ಜನತೆಗಾಗಿ ದುಡಿಯುವೆ ಬಿ ಶ್ರೀ ರಾಮುಲು.

ಬಳ್ಳಾರಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಸಂಸದರಾಗಿರುವ ಬಿ.ಶ್ರೀರಾಮುಲು ಸತತ ನಾಲ್ಕು ಬಾರಿ ನನ್ನನ್ನು ಗೆಲ್ಲಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನನ್ನನ್ನು ಬಹು ಎತ್ತರಕ್ಕೆ ಬೆಳೆಸಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನರಿಗಾಗಿ ನನ್ನ ಜೀವ, ಉಸಿರು ಇರೋವರೆಗೂ ದುಡಿಯುವುದಾಗಿ ಹೇಳಿದರು. ವಾಲ್ಮೀಕಿ ಭವನದಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ 200ಕ್ಕೂ ಹೆಚ್ಚು ಬೂತ್ ಮಟ್ಟದ ಬಿಜೆಪಿ ಜವಾಬ್ದಾರರ ನವಶಕ್ತಿ ಸಮಾವೇಶವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಐದು ವರ್ಷ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿ ಸಾಕಷ್ಟು ನೋವು, ಹಿಂಸೆ ಅನುಭವಿಸಿದ್ದೇವೆ.

ಮಣ್ಣಲ್ಲಿ ಮಣ್ಣಾಗುವವರೆಗು ಗ್ರಾಮೀಣ ಕ್ಷೇತ್ರದ ಜನತೆಗಾಗಿ ದುಡಿಯುವೆ ಬಿ ಶ್ರೀ ರಾಮುಲು.

ಮಣ್ಣಲ್ಲಿ ಮಣ್ಣಾಗುವವರೆಗು ಗ್ರಾಮೀಣ ಕ್ಷೇತ್ರದ ಜನತೆಗಾಗಿ ದುಡಿಯುವೆ ಬಿ ಶ್ರೀ ರಾಮುಲು.

ಈ ಬಾರಿಯ ಚುನಾವಣೆಯಲ್ಲಿ ಹಾಗಾಗಬಾರದು. ಈ ಹಿಂದೆ ಕ್ಷೇತ್ರದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿದ್ದೇವೆ. ಮತ್ತೆ ಅವಕಾಶ ನೀಡಿದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವನ್ನೇ ಸೃಷ್ಟಿಸ್ತೇವೆ ಎಂದರು. ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ಗುರುತಿಸಿ ಕಾಂಗ್ರೆಸ್ ಸರ್ಕಾರ ರೌಡಿ ಶೀಟರ್ ಪ್ರಕರಣ ದಾಖಲಿಸುತ್ತಿದೆ. ಅನೇಕ ಯುವಕರು ಕಾಂಗ್ರೆಸ್ಸಿಗರ ಷಡ್ಯಂತ್ರದಿಂದ ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ.

ಮಣ್ಣಲ್ಲಿ ಮಣ್ಣಾಗುವವರೆಗು ಗ್ರಾಮೀಣ ಕ್ಷೇತ್ರದ ಜನತೆಗಾಗಿ ದುಡಿಯುವೆ ಬಿ ಶ್ರೀ ರಾಮುಲು.

ಮಣ್ಣಲ್ಲಿ ಮಣ್ಣಾಗುವವರೆಗು ಗ್ರಾಮೀಣ ಕ್ಷೇತ್ರದ ಜನತೆಗಾಗಿ ದುಡಿಯುವೆ ಬಿ ಶ್ರೀ ರಾಮುಲು.

ಕಾಂಗ್ರೆಸ್‌ಗೆ ಇನ್ನು 60 ದಿನ ಮಾತ್ರ ಬಾಕಿ ಇದೆ. ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಎಲ್ಲ ಪ್ರಕರಣಗಳಿಂದ ನಿಮ್ಮನ್ನು ಮುಕ್ತಿಗೊಳಿಸುತ್ತಾರೆ. ಯಾರೂ ಧೃತಿಗೆಡಬೇಡಿ ಎಂದು ಕಾರ್ಯಕರ್ತರಿಗೆ ಅಭಯ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಏಜೆಂಟರುಗಳು, ಮುಖಂಡರುಗಳಿಗೆ ಮಾತ್ರ ಮರಳು ಸಿಗುತ್ತಿದೆ. ಮನೆ ಕಟ್ಟಲು ಕನಿಷ್ಟ ಒಂದು ಬಂಡಿ ಮರಳು ಸಹ ಸಿಗದಂತಾಗಿದೆ. ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ಆ ಸೂರ್ಯ ಚಂದ್ರ ಎಷ್ಟು ನಿಜವೋ ಮುಂದಿನ ಮುಖ್ಯಮಂತ್ರಿ ಬಿಎಸ್‍ವೈ ಆಗೋದು ಅಷ್ಟೇ ನಿಜ ಎಂದರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಎಸ್.ಫಕ್ಕಿರಪ್ಪ ಅವರು ಮಾತನಾಡಿ, ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ. ಎಸ್. ಯಡಿಯೂರಪ್ಪನವರ ಅವಧಿಯಲ್ಲಿ ಬಿ.ಶ್ರೀರಾಮುಲು ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಎಲ್ಲರೊಂದಿಗೂ ಸ್ಪಂದಿಸಿ ಕಷ್ಟಕ್ಕೆ ಆಗಿದ್ದಾರೆ. ನಾನೂ ಕೂಡ ಕಟ್ಟ ಕಡೆಯ ಕಾರ್ಯಕರ್ತರನ್ನೂ ಬಿಡದೇ ಎಲ್ಲ ಜನರ ಹಿತ ಕಾಯುತ್ತೇನೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮಾಜಿ ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಬಿಜೆಪಿ ಮುಖಂಡರಾದ ಅನಿಲ್ ನಾಯ್ಡು, ಓಬಳೇಶ್ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.