Skip to main content
ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪುನೀತ್

ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪುನೀತ್

ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪುನೀತ್

Kannada new film  sudeep power star punith

ಕಿಚ್ಚ ಸುದೀಪ್ ಅವರ ಬಯೋಗ್ರಫಿ ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬಕ್ಕೆ ಶುಭ ಕೋರಿದರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪತ್ರಕರ್ತ ಶರಣು ಹುಲ್ಲೂರು ಬರೆದ ಈ ಪುಸ್ತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪುನೀತ್ ರಾಜ್ ಕುಮಾರ್, ಸಮಗ್ರ ಮಾಹಿತಿ, ಅಪರೂಪದ ಫೋಟೋ ಒಳಗೊಂಡಿರುವ ಕೃತಿಯ ಓದುಗರನ್ನು ಸೆಳೆಯಲಿದೆ ಎಂದರು. ಈ ಪುಸ್ತಕದಲ್ಲಿ ಸುದೀಪ್ ಮತ್ತು ಪುನೀತ್ ಅವರ ಬಾಲ್ಯದ ಅಪರೂಪದ ಫೋಟೋ ಇದ್ದು, ಅದನ್ನು ಕಂಡು ಸಂಭ್ರಮಿಸಿದರು. ಮತ್ತು ಈ ಹೊತ್ತಿನಲ್ಲಿ ಬಾಲ್ಯದ ಹಲವು ನೆನಪುಗಳನ್ನು ಹಂಚಿಕೊಂಡರು. ಪುಸ್ತಕ ಬಿಡುಗಡೆ ಸಂಧರ್ಭದಲ್ಲಿ ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ನಿರ್ಮಾಪಕ ಜಾಕ್ ಮಂಜು ಉಪಸ್ಥಿತರಿದ್ದರು.

Kannada new film

ಪುಸ್ತಕದ ಕುರಿತು : ಬಾಲ್ಯದಿಂದ ಈವರೆಗಿನ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಹಿಡಿದಿಡಲಾಗಿದ್ದು, ಸಿನಿಮಾ ರಂಗದ ಅನೇಕ ಘಟನೆಗಳಿಗೆ ಈ ಪುಸ್ತಕ ಸಾಕ್ಷಿಯಾಗಲಿದೆ. ಕಿಚ್ಚ ಸುದೀಪ್ ಅವರ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕ ಇದಾಗಿದ್ದು, ಅಪರೂಪದ ಅನೇಕ ಫೋಟೋಗಳನ್ನು ಬಳಸಲಾಗಿದೆ. ಈವರೆಗೂ ಆ ಫೋಟೋಗಳನ್ನು ಯಾರೂ ನೋಡಿರಲು ಸಾಧ್ಯವಿಲ್ಲ. ಅಲ್ಲದೇ, ಸುದೀಪ್ ಅವರ ತಂದೆ, ತಾಯಿ, ಅಕ್ಕಂದಿರು, ಪತ್ನಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುದೀಪ್ ಅವರ ಪುತ್ರಿ, ಅಪ್ಪನಿಗಾಗಿ ಪತ್ರ ಬರೆದಿದ್ದಾರೆ. ಕಿಚ್ಚನ ಬದುಕಿನ ಅನೇಕ ಇಂಟ್ರಸ್ಟಿಂಗ್ ಸಂಗತಿಗಳನ್ನು ಒಳಗೊಂಡಿರುವ ಪುಸ್ತಕ ಇದಾಗಿದೆ. ಸುದೀಪ್ ಅವರ ಕುರಿತಾಗಿ ಬರುತ್ತಿರುವ ಮೊದಲ ಪುಸ್ತಕ ಇದಾಗಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.