ATT ಪ್ಲಾಟ್ ಫಾರ್ಮನಲ್ಲಿ ಯಶಸ್ಸು ಕಂಡ ಪೇಂಟ್ ರ್ ಚಿತ್ರ .ದಿಲ್ ಖುಷ್ ಆದಾ ವೆಂಕಟ್ ಭರದ್ವಾಜ್.
ವೆಂಕಟ್ ಭರದ್ವಾಜ್ ನಿರ್ದೇಶನದ "ಪೇಂಟರ್"ಚಿತ್ರ .

ಕಳೆದವಾರವಷ್ಟೇ ಶ್ರೇಯಸ್ ಎಂಟರ್ಟೈನ್ಮೆಂಟ್ನ ATT ಪ್ಲಾಟ್ ಫಾರ್ಮಿನಲ್ಲಿ ಬಿಡುಗಡೆ ಗೊಂಡು,ಈಗ ಬರೀ ಭಾರತ ದೇಶ ಅಲ್ಲದೇ ಅಮೇರಿಕಾ,ಆಫ್ರಿಕಾ ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಬಹಳ ಹೆಸರು ಮತ್ತು ಸದ್ದುಮಾಡಿದೆ.
ಇನ್ನೂ ಪಂಜಾಬಿ ,ಮರಾಠಿ ,ತಮಿಳು ,ಮತ್ತು ಹಿಂದಿ ವಿವಿಧ ಭಾಷಿಗರು ಕೂಡ ಚಿತ್ರವನ್ನು ನೋಡಿ ಮೆಚ್ಚುಗೆ ವೆಕ್ತಪಡಿಸಿದ ಸಂತೋಷದ ವಿಷಯವನ್ನು ಮಾಧ್ಯಮಮಿತ್ರರ ಜೊತೆಗೆ ವೆಂಕಟ್ ಭರದ್ವಾಜ್ ಅವರು ಅಂಚಿಕೊಂಡಿದ್ದಾರೆ. ಅಲ್ಲದೇ ಇದರ ಜೊತೆಗೆ ಗೌರಿಗಣೇಶ ಹಬ್ಬದ ಪ್ರಯುಕ್ತ ಇನ್ನೊಂದು ಸಂತೋಷದ ವಿಷಯವನ್ನು ಹೇಳುತ್ತಾ,ಶ್ರೇಯಸ್ ಎಂಟರ್ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಎರಡು ಚಿತ್ರಗಳನ್ನು ನಿರ್ದೇಶನ ಮಾಡಲು ಅವಕಾಶ ದೊರೆತಿದೆ ಎಂದು ಹೇಳಿದ್ದಾರೆ.
ಈ ಹಿಂದೇಯಷ್ಟೇ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ,ತಾವು ಹೇಳಿದ ಎರಡು ಚಿತ್ರ ಕಥೆಗಳಿಗೆ ಆಕ್ಷನ್ ಕಟ್ ಹೇಳಲು ಗ್ರೀನ್ ಸಿಗ್ನಲ್ ನೀಡಿದ ವಿಷಯ ಖುಷಿ ಕೊಟ್ಟಿದೆ ಎನ್ನುತ್ತಾರೆ. ಮುಂಬರುವ ದಿನಗಳಲ್ಲಿ, ಚಿತ್ರದ ತಾರಾಗಣ ಆಯ್ಕೆ ಮತ್ತು ತಾಂತ್ರಿಕ ತಂಡದ ಆಯ್ಕೆಯನ್ನು ಮಾಡಲಾಗುತ್ತದೆ. ಎಲ್ಲಾ ಅಂದುಕೊಂಡಂತೆ ಸರಿಯಾದ ಪಕ್ಷದಲ್ಲಿ ಚಿತ್ರವು ಸೆಪ್ಟೆಂಬರ್ ನಲ್ಲಿ ಟೇಕಾಫ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ . ಈ ಉತ್ತಮ ಬೆಳವಣಿಗೆ ನನ್ನ ಕನ್ನಡ ಅಭಿಮಾನಿ ಪ್ರೇಕ್ಷಕರು ಮತ್ತು ಮಾಧ್ಯಮ ಮಿತ್ರರು ಮಾಡಿರುವ ಆಶೀರ್ವಾದ ಎಂದು ಹೇಳಲು ನನಗೆ ಖುಷಿ ಇದೆ .
ಇದೇ ಸಂದರ್ಭದಲ್ಲಿ ನಾನು ಶ್ರೇಯಸ್ ಎಂಟರ್ಟೈನ್ಮೆಂಟ್ ಮತ್ತು ನನ್ನ ಚಿತ್ರತಂಡ ಹಾಗೂ ಕನ್ನಡ ಅಭಿಮಾನಿಗಳಿಗೆ ನಮಸ್ಕರಿಸುತ್ತೇನೆ ಎಂದು ಹೇಳುತ್ತಾ , ನಿಮ್ಮೆಲ್ಲರ ಸಹಕಾರ ಮತ್ತು ಆಶೀರ್ವಾದದಿಂದ ಮಾತ್ರ ನಮಗೆ ಯಶಸ್ಸು ಕಂಡಿದೆ ಎಂದು ಹೇಳಲು ಮತ್ತೊಮ್ಮೆ ನಾನು ಬಯಸುತ್ತೇನೆ, ನಮಗೆ ನಿಮ್ಮ ಆಶೀರ್ವಾದ ಇರಲಿ ಮುಂಬರುವ ದಿನಗಳಲ್ಲಿ ಅತ್ಯುತ್ತಮ ಕನ್ನಡ ಚಿತ್ರಗಳನ್ನು ಕನ್ನಡಿಗರಿಗೆ ನಾನು ಉತ್ತಮ ಚಿತ್ರಗಳನ್ನು ನೀಡಲಿದ್ದೇನೆ ಎಂದು ವೆಂಕಟ್ ಭಾರದ್ವಾಜ್ ನಿರ್ದೇಶಕ ನಟ ನಿರ್ಮಾಪಕ ಇವರು ಹೇಳಿದ್ದಾರೆ .
Recent comments