“ಡೇಸ್ ಆಫ್ ಬೋರಪುರ” ದಲ್ಲಿ ನಟಿ ಅನಿತಾ ಭಟ್.
“ಡೇಸ್ ಆಫ್ ಬೋರಪುರ” ದಲ್ಲಿ ನಟಿ ಅನಿತಾ ಭಟ್.
![ “ಡೇಸ್ ಆಫ್ ಬೋರಪುರ”](/sites/default/files/inline-images/Days_of_borapura_trailer_hit.jpg)
ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಗ್ಲಾಮರ್ ಪಾತ್ರಗಳಲ್ಲಿ ಅಭಿನಯಿಸಿದ್ದ ನಟಿ ಅನಿತಾ ಭಟ್ ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಗ್ಲಾಮರ್ ಪಾತ್ರವನ್ನೇ ಮಾಡಿದ್ದರು. ಚಿತ್ರದಲ್ಲಿ ಡಾಲಿಯ ಗೆಳತಿಯಾಗಿ ಕಾಣಿಸಿಕೊಂಡಿದ್ದ ಪಾತ್ರ ಹೆಚ್ಚು ಬೋಲ್ಡ್ ಆಗಿದ್ದರಿಂದ ಈಗ ಅಂಥ ಪಾತ್ರಗಳು ಅರಸಿ ಬರುತ್ತಿವೆಯಂತೆ. ಅಪರೂಪವೆಂಬಂತೆ ಅನಿತಾ ಭಟ್ ಅವರು ಡಿ-ಗ್ಲಾಮರ್ ಚಿತ್ರವೊಂದರಲ್ಲಿ ನಟಿಸಿದ್ಯಾಗು ಇದೇ ವಾರ ಏ 27 ರಂದು ತೆರೆ ಕಾಣಲಿರುವ “ಡೇಸ್ ಆಫ್ ಬೋರಪುರ” ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
![“ಡೇಸ್ ಆಫ್ ಬೋರಪುರ”](/sites/default/files/inline-images/fe86615df8-poster%20zbzdfg.jpg)
ಗ್ಲಾಮರ್ ಪಾತ್ರಗಳಲ್ಲಿ ನಟಿಸಿ ಬೇಸತ್ತಿರುವ ಅನಿತಾ ಭಟ್ ಮುಂದಿನ ದಿನಗಳಲ್ಲಿ ವಿಭಿನ್ನ ಪಾತ್ರಗಳ ನಿರಿಕ್ಷೇಯಲ್ಲಿದ್ದಾರೆ. ಟಗರು ಚಿತ್ರದ ಯಶಸ್ಸಿನ ನಂತರ ಹಲವು ಚಿತ್ರಗಳಿಗೆ ಆಫರ್ ಬರುತ್ತಿವೆಯಂತೆ ಇವುಗಳಲ್ಲಿ ಹೆಚ್ಚು ಗ್ಲಾಮರ್ ಕ್ಯಾರಕ್ಟರ್ ಗಳು ಆಗಿದ್ದು, ಸುಮಾರು 10 ಕಥೆಗಳನ್ನು ರಿಜೆಕ್ಟ್ ಮಾಡಿರುವುದಾಗಿ ಅನಿತಾ ಭಟ್ ಹೇಳಿದ್ದಾರೆ. ಇನ್ನೂ ಮುಂದೆ ಬೊಲ್ಡ್ ಕ್ಯಾರಕ್ಟರಗಳಲ್ಲಿ ನಟಿಸುವುದಿಲ್ಲ ಅಂತಲ್ಲ, ಬೊಲ್ಡ್ ಪಾತ್ರಗಳು ಸಿಕ್ಕಾಗ ಅದಕ್ಕೊಂದು ತೂಕ ಇರಬೇಕು, ಹಾಗಿದ್ದರೆ ಮಾತ್ರ ನಾನು ನಟಿಸುತ್ತೇನೆ,ಅಲ್ಲದೆ “ಡೇಸ್ ಆಫ್ ಬೋರಾಪುರ”ದಲ್ಲಿ ಅನಿತಾ ಡ್ರಾಮಾ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೇಲೆ ಅವರು ಹೆಚ್ಚು ನಿರಕ್ಷೇಯನ್ನು ಇಟ್ಟುಕೊಂಡಿದ್ದಾರೆ.
ಅಲ್ಲದೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರು ಸಿನಿಮಾದಲ್ಲಿ 40ಕ್ಕೂ ಹೆಚ್ಚು ವಿಭಿನ್ನ ಪಾತ್ರಗಳು ಇದ್ದು ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿಗೆ , ಚಿತ್ರದ ಕಥೆಗೆ ತಕ್ಕಂತೆ ಸ್ಕ್ರಿನ್ ಪ್ಲೆ ಮೂಡಿ ಬಂದಿದೆ ಎನ್ನುತ್ತಾರೆ. ಡೇಸ್ ಆಫ್ ಬೋರಾಪುರ ಚಿತ್ರವನ್ನು ಆದಿತ್ಯ ಕುಣಿಗಲ್ ನಿರ್ದೇಸಿದ್ದಾರೆ,ಚಿತ್ರಕ್ಕೆ ಬಸವರಾಜ್ ಬಂಡವಾಳ ಹೂಡಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ,ಚಿತ್ರದಲ್ಲಿ ಅನಿತಾ ಭಟ್,ಸೂರ್ಯ ಸಿದ್ದಾರ್ಥ,ಅಮಿತ್ ರಂಗನಾಥ್ ಮತ್ತು ಸುಚಿಂದ್ರ ಪ್ರಸಾದ್ ನಟಿಸಿದ್ದಾರೆ.
Recent comments