Skip to main content
"ಬಡವ ರಾಸ್ಕಲ್" ಗೆ ಐವತ್ತರ ಸಂಭ್ರಮ* .

"ಬಡವ ರಾಸ್ಕಲ್" ಗೆ ಐವತ್ತರ ಸಂಭ್ರಮ* .

"ಬಡವ ರಾಸ್ಕಲ್" ಗೆ ಐವತ್ತರ ಸಂಭ್ರಮ* .

Kannada

*ಸಹಕಾರ ನೀಡಿದವರಿಗೆ ಸನ್ಮಾನಿಸಿದ ಡಾಲಿ.

* ತಮ್ಮ ನಟನೆಯ ಮೂಲಕ ಹೆಸರಾಗಿದ್ದ ಡಾಲಿ ಧನಂಜಯ, "ಬಡವ ರಾಸ್ಕಲ್" ಚಿತ್ರದಿಂದ ನಿರ್ಮಾಪಕರಾದರು. ಕಳೆದವರ್ಷದ ಅಂತ್ಯದಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ ಧನಂಜಯ್ ಅಭಿನಯದ "ಬಡವ ರಾಸ್ಕಲ್" ಚಿತ್ರ ಐವತ್ತು ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಡಾಲಿ, ಸುಂದರ ಸಮಾರಂಭವೊಂದನ್ನು ಆಯೋಜಿಸಿದ್ದರು. ಕಾರ್ಮಿಕರು, ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ಸ್ನೇಹಿತರು ಹೀಗೆ ಸುಮಾರು 220 ಕ್ಕೂ ಅಧಿಕ ಜನರಿಗೆ ಸ್ಮರಣಿಕೆ ಹಾಗೂ ಬೆಳ್ಳಿನಾಣ್ಯ ನೀಡಿ ಸತ್ಕರಿಸಿದರು.

ಅಷ್ಟೇ ಅಲ್ಲದೇ ಕಾರ್ಯಕ್ರಮದ ಕೊನೆಯಲ್ಲಿ ಭೂರಿ ಭೋಜನದ ವ್ಯವಸ್ಥೆ ಸಹ ಮಾಡಿದ್ದರು.‌ ನಾನು ಈ ಸಿನಿಮಾವನ್ನು ಹಳೆಯ ನಿರ್ಮಾಪಕರಿಂದ ಪಡೆದುಕೊಳ್ಳಲು ಸ್ವಲ್ಪ ಹೆಚ್ಚಿನ ಹಣ ಬೇಕಿತ್ತು.‌ ಸುಮ್ಮನೆ ಕೆಲವು ಸ್ನೇಹಿತರಿಗೆ ಫೋನ್ ಮಾಡಿದೆ.‌ ಎಲ್ಲರೂ ಏನು ಅಪೇಕ್ಷೆ ಇಲ್ಲದೆ ಸಹಾಯ ಮಾಡಿದ್ದಾರೆ.

Kannada

ಇನ್ನೂ ನಾನು ಹಿಂದಿರುಗಿಸಿಲ್ಲ.‌ ಸದ್ಯದಲ್ಲೇ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಹೊಸ ‌ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯಿದೆ. ಇದೇ ಚಿತ್ರ‌ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ. ಈ ತಿಂಗಳ 27 ರ ಭಾನುವಾರ ಸಂಜೆ ಕಲರ್ಸ್ ವಾಹಿನಿಯಲ್ಲಿ ನಮ್ಮ ಚಿತ್ರ ಪ್ರದರ್ಶನ ಕಾಣಲಿದೆ.‌ "ಬಡವ ರಾಸ್ಕಲ್" ನನ್ನೊಬ್ಬನ ಗೆಲುವಲ್ಲ ತಂಡದ ಗೆಲುವು ಎಂದರು ಧನಂಜಯ್. ಈ ಹಿಂದೆ ಪಾರ್ವತಮ್ಮ ರಾಜಕುಮಾರ್ ಅವರು ಈ ರೀತಿಯ ಸಮಾರಂಭ ಆಯೋಜಿಸಿ, ಎಲ್ಲರಿಗೂ ಬೆಳ್ಳಿಯ ಲೋಟ ನೀಡುತ್ತಿದ್ದರು. ನನ್ನ ಬಳಿ ಅವರು ನೀಡಿರುವ ಮೂರು ಬೆಳ್ಳಿಯ ಲೋಟ ಮಗಳಿವೆ. ಇತ್ತೀಚಿಗೆ ಇಂತಹ ಸಮಾರಂಭ ಕಡಿಮೆಯಾಗಿತ್ತು‌.‌ ಧನಂಜಯ್ ಮತ್ತೆ ಆರಂಭ ಮಾಡಿದ್ದಾರೆ ಒಳ್ಳೆಯದಾಗಲಿ ಎಂದು ರಂಗಾಯಣ ರಘು ಹಾರೈಸಿದರು. ನಾನು ನನ್ನ ಗೆಳೆಯನ ಜೊತೆ ಸದಾ ಇರುತ್ತೇನೆ.

ಅವನ ಈ ಒಳ್ಳೆಯ ‌ಕೆಲಸ ಎಲ್ಲರಿಗೂ ಮಾದರಿ. ‌ಹೆಡ್ ಬುಷ್ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದೇವೆ ಎಂದರು ಅತಿಥಿಯಾಗಿ ಆಗಮಿಸಿದ್ದ ನಟ ವಸಿಷ್ಠ ಸಿಂಹ. ನಿರ್ದೇಶಕ ಶಂಕರ್ ಗುರು, ನಾಯಕಿ ಅಮೃತ ಅಯ್ಯಂಗಾರ್, ನಟ ನಾಗಭೂಷಣ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮುಂತಾದ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆನಂದ್ ಆಡಿಯೋ ಶ್ಯಾಮ್, ನಿರ್ಮಾಪಕರಾದ ಕರಿಸುಬ್ಬು, ಸುಧೀಂದ್ರ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಮುಂತಾದ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.