ತೆರೆಯ ಮೇಲೆ ಬರಲು ಸಿದ್ದವಾದ " ನಮ್ಮ ಭಾರತ " ಚಿತ್ರ
ನಮ್ಮ ಭಾರತ

ಕಳೆದ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕುಮಾರಸ್ವಾಮಿ ನಿರ್ಮಿಸಿ ನಿರ್ದೇಶಿಸಿರುವ ಚಿತ್ರ " ನಮ್ಮ ಭಾರತ". ಮಂಡ್ಯ ನಾಗರಾಜ್ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದು ದೇಶದ ಬೆಲೆ ತಿಳಿಸುವ ಜೊತೆಗೆ ರಾಷ್ಟ್ರ ಧ್ವಜ ದೇಶ ಭಕ್ತಿಯ ಕಥೆಯನ್ನು ಒಳಗೊಂಡಿರುವ ಮಕ್ಕಳ ಚಿತ್ರ ಇದು. ಮಾತಿಗಿಳಿದ ಚಿತ್ರ ತಂಡ ಮೊದಲು ಮಾತು ಆರಂಭಿಸಿದ ಕುಮಾರಸ್ವಾಮಿ, 'ಧರ್ಮಸೆರೆ' ಸೇರಿದಂತೆ ಹಲವು ಚಿತ್ರಗಳಿಗೆ ಕ್ಯಾಮರಾಗೆ ಸಹಾಯಕರಾಗಿ ಕೆಲಸ ಮಾಡಿದ್ದೇನೆ.